ವೀಳ್ಯದೆಲೆ ಹೊಟ್ಟೆಯ ಸಮಸ್ಯೆಗೆ ಮಾತ್ರವಲ್ಲ, ಮಾನಸಿಕ ನೆಮ್ಮದಿ ಪಡೆಯೋಕೆ ಕೂಡ ಉಪಯೋಗಕ್ಕೆ ಬರುತ್ತೆ

Feb 12, 2026 - 09:44
 0  0
ವೀಳ್ಯದೆಲೆ ಹೊಟ್ಟೆಯ ಸಮಸ್ಯೆಗೆ ಮಾತ್ರವಲ್ಲ, ಮಾನಸಿಕ ನೆಮ್ಮದಿ ಪಡೆಯೋಕೆ ಕೂಡ ಉಪಯೋಗಕ್ಕೆ ಬರುತ್ತೆ
ಮನೆಯಲ್ಲಿ ಹಿರಿಯರು ಊಟದ ನಂತರ ಎಲೆ ಅಡಿಕೆ ಹಾಕಿಕೊಳ್ಳುವುದು ನಮಗೆಲ್ಲಾ ಗೊತ್ತೇ ಇದೆ. ಇನ್ನು ನಮ್ಮ ಹಿಂದೂ ಧರ್ಮದಲ್ಲಿ ವೀಳ್ಯದೆಲೆಯನ್ನು ಅತ್ಯಂತ ಪವಿತ್ರ ಹಾಗೂ ಪೂಜ್ಯನೀಯವೆಂದು ಪರಿಗಣಿಸುತ್ತಾರೆ. ಈ ಎಲೆಯನ್ನು ದೇವರ ಪೂಜೆ ಅಥವಾ ದೇವರ ಕಾರ್ಯಕ್ರಮಗಳಿಗೆ, ಇಲ್ಲಾಂದರೆ, ಮದುವೆಯಂತಹ ಶುಭ ಸಮಾರಂಭಗಳಲ್ಲಿ (ತಾಂಬೂಲ ವಾಗಿ) ಅರ್ಪಿಸುವ ಕ್ರಮವಿದೆ.

ವೈಜ್ಞಾನಿಕ ದೃಷ್ಟಿಯಿಂದ ನೋಡುವುದಾದರೆ ಈ ಅಭ್ಯಾಸ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಪ್ರಮುಖವಾಗಿ ವೀಳ್ಯದೆಲೆಯಲ್ಲಿ ಕಂಡು ಬರುವ ಆರೋಗ್ಯಕಾರಿ ಅಂಶಗಳು ನಾವು ಸೇವಿಸಿದ ಆಹಾರವನ್ನು ಚೆನ್ನಾಗಿ ಜೀರ್ಣ ಮಾಡುವುದರ ಜೊತೆಗೆ ಹೊಟ್ಟೆಯ ಸಮಸ್ಯೆಗಳಾದ ಅಜೀರ್ಣ ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರ ಮತ್ತು ಮಲಬದ್ಧತೆಯನ್ನು ದೂರ ಮಾಡುವಲ್ಲಿ ಚೆನ್ನಾಗಿ ಕೆಲಸ ಮಾಡುತ್ತದೆ. ಆದರೆ ಈ ಎಲೆಗಳ ಉಪಯೋಗ ಇಷ್ಟಕ್ಕೆ ಮಾತ್ರ ನಿಂತಿಲ್ಲ, ಅನೇಕ ಕಾಯಿಲೆಗಳನ್ನು ಉಪಶಮನಗೊಳಿಸುವ ಶಕ್ತಿಯನ್ನೂ ಹೊಂದಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0