ಅಡುಗೆಮನೆಯ ಸಿಂಕ್ನಲ್ಲಿ ನೀರು ನಿಲ್ಲುವುದು ಪ್ರತಿಯೊಬ್ಬರ ಮನೆಯಲ್ಲೂ ಕಾಣಸಿಗುವ ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ಕೆಲವೊಮ್ಮೆ ಸಿಂಕ್ನಲ್ಲಿ ಏನೂ ಸಿಕ್ಕಿಹಾಕಿಹಾಕಿಕೊಳ್ಳದಿದ್ದರೂ
ಸಿಂಕ್ ಬ್ಲಾಕ್ ಆಗುತ್ತದೆ. ಸಿಂಕ್ನಲ್ಲಿ ನೀರು ಖಾಲಿಯಾಗದ ಕಾರಣ ಪಾತ್ರೆಗಳನ್ನು ತೊಳೆಯಲು ನೀವು ಕಷ್ಟಪಡುತ್ತೀರಿ. ಸಿಂಕ್ನಲ್ಲಿ ನೀರು ಹೆಚ್ಚು ಹೊತ್ತು ನಿಂತರೆ, ಅದು ದುರ್ವಾಸನೆಗೆ ಕಾರಣವಾಗಬಹುದು ಇದರಿಂದ ಇಡೀ ಅಡುಗೆಮನೆ ಕೊಳಕಾಗಿರುತ್ತದೆ. ಕೆಲವೊಮ್ಮೆ ಏನಾದರೂ ಆಹಾರದ ಕಣಗಳೇ ಸಿಲುಕಬೇಕೆಂದಿಲ್ಲ, ನಿಮಗರಿವಿಲ್ಲದಂತೆ ಕೂದಲು ಕೂಡಾ ಸಿಂಕ್ನಲ್ಲಿ ಸಿಲುಕಿ ಬ್ಲಾಕ್ ಆಗುವ ಸಾಧ್ಯತೆ ಇದೆ. ಈ ಸಮಸ್ಯೆಯನ್ನು ನಿವಾರಿಸಲು ಇಲ್ಲಿದೆ ಟಿಪ್ಸ್.