ಕೇಂದ್ರ ಸರ್ಕಾರದಿಂದ ವಂದೇ ಮಾತರಂಗೆ ಹೊಸ ಗೈಡ್​ಲೈನ್ಸ್​!: ಇನ್ಮುಂದೆ ಜನಗಣಮನಕ್ಕೂ ಮುನ್ನ ವಂದೇ ಮಾತರಂ ಕಡ್ಡಾಯ!

Feb 12, 2026 - 09:44
 0  0
ಕೇಂದ್ರ ಸರ್ಕಾರದಿಂದ ವಂದೇ ಮಾತರಂಗೆ ಹೊಸ ಗೈಡ್​ಲೈನ್ಸ್​!: ಇನ್ಮುಂದೆ ಜನಗಣಮನಕ್ಕೂ ಮುನ್ನ ವಂದೇ ಮಾತರಂ ಕಡ್ಡಾಯ!

ದೇಶದ ಸಾಂಸ್ಕೃತಿಕ ಮತ್ತು ದೇಶಭಕ್ತಿಯ ಸಂಕೇತವಾದ ವಂದೇ ಮಾತರಂ ಗೀತೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ ಮಹತ್ವದ ನಿರ್ಧಾರ ಒಂದನ್ನ ತೆಗೆದುಕೊಂಡಿದೆ. ಮಹತ್ವದ ಬೆಳವಣಿಗೆಯೊಂದರಲ್ಲಿ ವಂದೇ ಮಾತರಂ ಗೀತೆಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿರೋ ಕೇಂದ್ರ ಸರ್ಕಾರ, ಸರ್ಕಾರಿ ಕಾರ್ಯಕ್ರಮಗಳಲ್ಲಿ.. ಶಾಲೆಗಳಲ್ಲಿ ವಂದೇ ಮಾತರಂ ನುಡಿಸುವಾಗ ಎದ್ದು ನಿಲ್ಲುವುದನ್ನ ಕಡ್ಡಾಯಗೊಳಿಸಿದೆ. 

ಕೇಂದ್ರ ಸರ್ಕಾರದಿಂದ ವಂದೇ ಮಾತರಂಗೆ ಹೊಸ ಗೈಡ್​ಲೈನ್ಸ್​!
ಇನ್ಮುಂದೆ ಜನಗಣಮನಕ್ಕೂ ಮುನ್ನ ವಂದೇ ಮಾತರಂ ಕಡ್ಡಾಯ!
ಜನ.. ಗಣ.. ಮನ.. ಅಂತ ಕೇಳ್ತಿದ್ದಂತೆ ಯಾರು ಯಾವುದೇ ಕೆಸಲದಲ್ಲಿದ್ರೂ.. ಎಲ್ಲವನ್ನೂ ಬಿಟ್ಟು ನಿಂತು. ರಾಷ್ಟ್ರ ಗೀತೆಗೆ ಗೌರವ ಸಲ್ಲಿಸುತ್ತಿದ್ರು. ಈಗ, ರಾಷ್ಟ್ರಗೀತೆ ಜನ ಗಣ ಮನದಂತೆಯೇ ವಂದೇ ಮಾತರಂ ಗೀತೆ ಕೂಡ ಕಡ್ಡಾಯವಾಗಿದೆ. ವಂದೇ ಮಾತರಂ ಬಗ್ಗೆ ಹೊಸ ನಿಯಮವನ್ನ ಜಾರಿಗೊಳಿಸಲಾಗಿದೆ. ಈ ನಿಯಮದಡಿಯಲ್ಲಿ, ರಾಷ್ಟ್ರಗೀತೆಗೆ ಮೊದಲು ವಂದೇ ಮಾತರಂ ಹಾಡಲಾಗುತ್ತದೆ. ಈ ಸಮಯದಲ್ಲಿ ಎದ್ದು ನಿಲ್ಲುವುದು ಕಡ್ಡಾಯ. ಪ್ರತಿ ಸರ್ಕಾರಿ ಸಮಾರಂಭದಲ್ಲಿ ಅದನ್ನ ಹಾಡುವುದು ಕಡ್ಡಾಯವಾಗಿರುತ್ತೆ ಅಂತ ಕೇಂದ್ರ ಸರ್ಕಾರ ವಂದೇ ಮಾತರಂ ಬಗ್ಗೆ ತನ್ನ ಆದೇಶವನ್ನ ಹೊರಡಿಸಿದೆ. 
ಕೇಂದ್ರ ಗೃಹ ಸಚಿವಾಲಯವು ಇಂದು ಬೆಳಗ್ಗೆ ವಂದೇ ಮಾತರಂ ಗೀತೆಯ ಕುರಿತು ಹೊಸ ಮಾರ್ಗಸೂಚಿಗಳನ್ನ ಹೊರಡಿಸಿದೆ. ಈ ಮಾರ್ಗಸೂಚಿಗಳ ಅನ್ವಯ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ಮತ್ತು ಎಲ್ಲಾ ಶಾಲೆಗಳಲ್ಲಿ ರಾಷ್ಟ್ರಗೀತೆ ಜನ ಗಣ ಮನ ನುಡಿಸುವ ಮೊದಲು ಬಳಿಕ ವಂದೇ ಮಾತರಂ ನುಡಿಸಬೇಕು ಮತ್ತು ಎಲ್ಲರೂ ಹಾಡುವಾಗ ಎದ್ದು ನಿಲ್ಲಬೇಕು ಅನ್ನೋದನ್ನ ಸ್ಪಷ್ಟಪಡಿಸಿದೆ. 
1937ರಲ್ಲಿ ಕಾಂಗ್ರೆಸ್ ತೆಗೆದುಹಾಕಿದ ನಾಲ್ಕು ಚರಣಗಳನ್ನ ಒಳಗೊಂಡಂತೆ.. 3 ನಿಮಿಷ 10 ಸೆಕೆಂಡ್​ನ ವಂದೇ ಮಾತರಂ ಗೀತೆಯ ಎಲ್ಲಾ ಆರು ಚರಣಗಳನ್ನ ನುಡಿಸುವುದು ಕಡ್ಡಾಯಗೊಳಿಸಲಾಗಿದೆ. ಆದರೆ ಚಿತ್ರಮಂದಿರಗಳಲ್ಲಿ ಈ ಗೀತೆಯನ್ನ ನುಡಿಸುವುದು ಕಡ್ಡಾಯವಲ್ಲ ಎಂದು ಕೇಂದ್ರ ಗೃಹ ಸಚಿವಾಲಯದ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದ್ದು, ವಂದೇ ಮಾತರಂ ಹಾಡುವಾಗ ಎದ್ದು ನಿಲ್ಲದಿದ್ದರೆ ಶಿಕ್ಷೆ-ದಂಡಕ್ಕೆ ಫಿಕ್ಸ್​ ಅಂತಾನೂ ಘೋಷಿಸಿದೆ.

ಮಾರ್ಗಸೂಚಿಯಲ್ಲಿ ಏನಿದೆ? 
‘ಜನಗಣಮನ’ಕ್ಕಿರುವ ಗೌರವ ‘ವಂದೇ ಮಾತರಂ’ಗೂ ನೀಡಬೇಕು
ರಾಷ್ಟ್ರ ಗೀತೆಗೂ ಮೊದಲು ಇನ್ಮುಂದೆ ‘ವಂದೇ ಮಾತರಂ’ ಕಡ್ಡಾಯ 
ಶಾಲೆ, ಸರ್ಕಾರಿ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಹಾಡಬೇಕು
ಸರ್ಕಾರಿ ಕಚೇರಿಗಳು, ಸರ್ಕಾರಿ ಸಮಾರಂಭಗಳಿಗೂ ಅನ್ವಯಿಸುತ್ತದೆ
ಸರ್ಕಾರಿ ಕಾರ್ಯಕ್ರಮದಲ್ಲಿ ಹಾಡುವಾಗ ಎದ್ದು ನಿಲ್ಲುವುದು ಕಡ್ಡಾಯ
ಚಿತ್ರಮಂದಿರಗಳಲ್ಲಿ ವಂದೇ ಮಾತರಂ ಗೀತೆ ನುಡಿಸೊದು ಕಡ್ಡಾಯವಲ್ಲ 
ರಾಷ್ಟ್ರಗೀತೆಗೆ ಇರುವ ಶಿಷ್ಟಾಚಾರಗಳನ್ನ ವಂದೇ ಮಾತರಂ ಗೀತೆಗೆ ವಿಸ್ತಾರ
ರಾಷ್ಟ್ರಗೀತೆಗೆ ಅಡ್ಡಿಪಡಿಸಿ, ಗೌರವಿಸುವುದನ್ನ ತಡೆದ ವ್ಯಕ್ತಿಗೆ 3 ವರ್ಷ ಜೈಲು

(ಜನಗಣಮನಕ್ಕಿರುವ ಗೌರವ ವಂದೇ ಮಾತರಂಗೂ ನೀಡಬೇಕು. ರಾಷ್ಟ್ರ ಗೀತೆಗೂ ಮೊದಲು ಇನ್ಮುಂದೆ ವಂದೇ ಮಾತರಂ ಕೂಡ ಕಡ್ಡಾಯವಾಗಿರುತ್ತೆ. ಶಾಲೆ, ಸರ್ಕಾರಿ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಗೀತೆ ಹಾಡಬೇಕು. ಸರ್ಕಾರಿ ಕಚೇರಿಗಳು, ಸರ್ಕಾರಿ ಸಮಾರಂಭಗಳಿಗೂ ಅನ್ವಯಿಸುತ್ತದೆ. ಸರ್ಕಾರಿ ಕಾರ್ಯಕ್ರಮದಲ್ಲಿ ಹಾಡುವಾಗ ಎದ್ದು ನಿಲ್ಲುವುದು ಕಡ್ಡಾಯ ಎಂದಿದೆ. ಚಿತ್ರಮಂದಿರಗಳಲ್ಲಿ ವಂದೇ ಮಾತರಂ ಗೀತೆ ನುಡಿಸುವುದು ಕಡ್ಡಾಯವಲ್ಲ ಅಂತ ಕೂಡ ಹೇಳಿದೆ. ರಾಷ್ಟ್ರಗೀತೆಗೆ ಇರುವ ಶಿಷ್ಟಾಚಾರಗಳನ್ನ ವಂದೇ ಮಾತರಂ ಗೀತೆಗೆ ವಿಸ್ತಾರಿಸಲಾಗಿದೆ. ರಾಷ್ಟ್ರಗೀತೆಗೆ ಅಡ್ಡಿಪಡಿಸಿ, ಗೌರವಿಸುವುದನ್ನ ತಡೆದ ವ್ಯಕ್ತಿಗೆ 3 ವರ್ಷ ಜೈಲು ಎಂಬ ಕಾನೂನು ಘೋಷಣೆಯಾಗಿದೆ)

ಎಲ್ಲೆಲ್ಲಿ ಗೈಡ್​ಲೈನ್ಸ್?
ಕಡ್ಡಾಯ?                          
ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ             
ರಾಷ್ಟ್ರಪತಿಗಳು ಹಾಡೋ ಕಾರ್ಯಕ್ರಮಗಳಲ್ಲಿ     
ಸರ್ಕಾರಿ ಕಚೇರಿಗಳು, ಸರ್ಕಾರಿ ಸಮಾರಂಭ      
ಕಡ್ಡಾಯವಲ್ಲ?
ಸಿನಿಮಾ ಮಂದಿರಗಳಲ್ಲಿ
ಯಾವುದೇ ಖಾಸಗಿ ಸಮಾರಂಭದಲ್ಲಿ
ಧಾರ್ಮಿಕ ಅಥವಾ ಸಾಮಾಜಿಕ ಸಭೆಯಲ್ಲಿ

(ವಂದೇ ಮಾತರಂ ಗೀತೆಯನ್ನ ನಾಗರಿಕ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಮತ್ತು ರಾಷ್ಟ್ರಪತಿಗಳು ಭಾಗವಹಿಸುವ ಕಾರ್ಯಕ್ರಮಗಳಲ್ಲಿ. ಸರ್ಕಾರಿ ಕಚೇರಿಗಳು, ಸರ್ಕಾರಿ ಸಮಾರಂಭಗಳಲ್ಲಿ ಹಾಡಲೇ ಬೇಕು ಅಂತ ಕೇಂದ್ರ ಹೇಳಿದೆ. ಸಿನಿಮಾ ಮಂದಿರಗಳಲ್ಲಿ.. ಯಾವುದೇ ಖಾಸಗಿ ಸಮಾರಂಭದಲ್ಲಿ. ಧಾರ್ಮಿಕ ಅಥವಾ ಸಾಮಾಜಿಕ ಸಭೆಯಲ್ಲಿ ಕಡ್ಡಾಯವಲ್ಲ ಅಂತ ಸೂಚಿಸಲಾಗಿದೆ.) 

ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆ ಅಂಗವಾಗಿ ಸಂಸತ್ತಿನಲ್ಲಿ ಸುದೀರ್ಘ ಚರ್ಚೆ ನಡೆಸಲಾಗಿತ್ತು. ಈ ಚರ್ಚೆಗಳಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್‌ ನೇತೃತ್ವದ ವಿಪಕ್ಷಗಳ ನಡುವೆ ಭಾರೀ ವಾದ-ವಿವಾದಗಳು ಏರ್ಪಟ್ಟಿದ್ದವು. ಈ ಬಗ್ಗೆ ದೆಹಲಿಯಲ್ಲಿ ಪ್ರತಿಕ್ರಯೆ ನೀಡಿದ ಡಿಸಿಎಂ ಡಿ.ಕೆ ಶಿವಕುಮಾರ್, ವಂದೇ ಮಾತರಂಗೆ.. ದೇಶಕ್ಕೆ ಬುನಾದಿ ಹಾಕಿದ್ದೇ ಕಾಂಗ್ರೆಸ್​. ಸ್ವಾತಂತ್ರ್ಯ, ಸಂವಿಧಾನ ತಂದುಕೊಟ್ಟ ಪಕ್ಷ ನಮ್ಮದು... ನಮ್ಮ ಹಾದಿಯನ್ನ ಬಿಜೆಪಿ ಹಿಡಿದಿದೆ ಅಂತ ಕ್ರೆಡಿಟ್​ ತಗೊಂಡಿದ್ದಾರೆ.

ಡಿಕೆಶಿ ಹೇಳಿಕೆ ನೋಡ್ತಿದ್ರೆ ಪರೋಕ್ಷವಾಗಿ ಸ್ವಾಗತ ಮಾಡಿದಂತೆ ಕಾಣ್ತಿದೆ. ಅದ್ದೇನೆ ಇರಲಿ, ಒಂದು ಕಾರ್ಯಕ್ರಮದಲ್ಲಿ ಎರಡೂ ಹಾಡುಗಳನ್ನ ಒಟ್ಟಿಗೆ ನುಡಿಸಿದಾಗ, ವಂದೇ ಮಾತರಂ ಮೊದಲು ಬರುತ್ತದೆ.. ನಂತರ ಜನ ಗಣ ಮನ ಬರುತ್ತದೆ ಎಂದು ಆದೇಶವು ಸ್ಪಷ್ಟವಾಗಿ ಹೇಳ್ತಿದೆ. ಎರಡ್ರಲ್ಲೂ ನಿಲ್ಲುವುದು ಕಡ್ಡಾಯವಾಗಿದೆ.

ನ್ಯೂಸ್ ಫಸ್ಟ್​ ಬ್ಯುರೋ.


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0