ಲೆಕ್ಸಾಸ್ ಕಂಪನಿಯ ಹೊಸ ಕಾರ್ ಖರೀದಿಸಿದ ಡಿಸಿಎಂ ಡಿಕೆಶಿ : ಹೊಸ ಸದಸ್ಯನ ಸ್ವಾಗತಿಸಿದ ಡಿಕೆಶಿ ಪತ್ನಿ ಉಷಾ

Feb 12, 2026 - 09:44
 0  0
ಲೆಕ್ಸಾಸ್ ಕಂಪನಿಯ ಹೊಸ ಕಾರ್ ಖರೀದಿಸಿದ ಡಿಸಿಎಂ ಡಿಕೆಶಿ : ಹೊಸ ಸದಸ್ಯನ ಸ್ವಾಗತಿಸಿದ ಡಿಕೆಶಿ ಪತ್ನಿ ಉಷಾ


ಡಿಸಿಎಂ ಡಿಕೆ ಶಿವಕುಮಾರ್  ಅವರ ಮನೆಗೆ ಹೊಸ ಸದಸ್ಯರ ಆಗಮನವಾಗಿದೆ. ಅರ್ಥಾತ್‌ ಡಿಸಿಎಂ ಡಿ.ಕೆ. ಶಿವಕುಮಾರ್‌  ಅವರು ಹೊಸ ಕಾರ್ ಖರೀದಿಸಿದ್ದಾರೆ. ಇಂದು ಡಿ.ಕೆ.ಶಿವಕುಮಾರ್ ಅವರ ಬೆಂಗಳೂರಿನ ಸದಾಶಿವನಗರ ನಿವಾಸಕ್ಕೆ ಹೊಸ ಕಾರ್ ಡೆಲಿವರಿ ಆಗಿದೆ.  ಲೆಕ್ಸಾಸ್ ಕಂಪನಿಯ ಕಾರ್ ಅನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಖರೀದಿಸಿದ್ದಾರೆ.  ಡಿಕೆಶಿ ನಿವಾಸಕ್ಕೆ ಬ್ರಾಂಡ್ ನ್ಯೂ ಕಾರು ಬಂದಿದೆ. Lexus LM 350h 7 ಸೀಟರ್ ಕಾರು  ಅನ್ನು ಡಿಸಿಎಂ ಡಿ.ಕೆ.ಶಿವಕುಮಾರ್‌ ಖರೀದಿಸಿದ್ದಾರೆ. ಈ ಕಾರ್‌ನ ಬೆಲೆ ಬರೋಬ್ಬರಿ 2.8 ಕೋಟಿ ರೂಪಾಯಿ. ಬಿಳಿ ಬಣ್ಣದ ಕಾರ್ ಅನ್ನು ಡಿಕೆ ಶಿವಕುಮಾರ್ ಖರೀದಿಸಿದ್ದಾರೆ. ಸದಾಶಿವನಗರದ ಡಿಸಿಎಂ ಡಿಕೆಶಿ ನಿವಾಸಕ್ಕೆ ಲೆಕ್ಸಾಸ್ ಕಂಪನಿಯ ಷೋರೂಮು ಸಿಬ್ಬಂದಿಯೇ ಕಾರ್ ಅನ್ನು ಹೋಮ್ ಡೆಲಿವರಿ ಮಾಡಿದ್ದಾರೆ.  ಹೊಸ ಬ್ರಾಂಡ್ ನ್ಯೂ ಕಾರ್ ಅನ್ನು ಡಿ.ಕೆ.ಶಿವಕುಮಾರ್ ಪತ್ನಿ ಉಷಾ ಮನೆಗೆ ಬರಮಾಡಿಕೊಂಡಿದ್ದಾರೆ.  KA 03 NZ 6666 ನಂಬರ್ ಪ್ಲೇಟ್ ಇರುವ ಕಾರು ಅನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಖರೀದಿಸಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0