ತಮಿಳು ನಟ ಧನುಷ್- ನಟಿ ಮೃಣಾಲ್ ಠಾಕೂರ್ ನಡುವೆ ಏನಿಲ್ಲ, ಏನಿಲ್ಲ! ಧನುಷ್ ನನ್ನ ಸಹೋದರ ಎಂದ ಮೃಣಾಲ್ ಠಾಕೂರ್

ತಮಿಳಿನ ಸ್ಟಾರ್ ನಟ ಧನುಷ್ ಹಾಗೂ ಬಾಲಿವುಡ್ ನಟಿ ಮೃಣಾಲ್ ಠಾಕೂರ್ ಮಧ್ಯೆ ಏನೋ ನಡೀತಿದೆ.. ಇಬ್ಬರೂ ಡೇಟಿಂಗ್ ಮಾಡ್ತಿದ್ದಾರೆ ಅನ್ನೋ ವದಂತಿ ಓಡಾಡುತ್ತಿತ್ತು. ಸದ್ಯದಲ್ಲೇ ಇಬ್ಬರು ಮದುವೆ ಆಗ್ತಾರೆ ಅನ್ನೋ ವಿಚಾರವೂ ಗಾಳಿಯಂತೆ ಹಬ್ಬಿತ್ತು.. ಇದೀಗ ಈ ವಿಚಾರವಾಗಿ ಮೃಣಾಲ್, ಪ್ರತಿಕ್ರಿಯಿಸಿದ್ದಾರಂತೆ.. ಧನುಷ್ ನನ್ನ ಸಹೋದರ ರೀತಿ.. ನಮ್ಮಿಬ್ಬರ ಮಧ್ಯೆ ಪ್ರೊಫೆಷನಲ್ ರಿಲೇಷ್ನನ್ಶಿಪ್ ಮಾತ್ರ ಇರೋದು ಅಂತಾ ತಿಳಿಸಿದ್ದಾರೆ.
ನನ್ನ ಕಠಿಣ ಪರಿಶ್ರಮ ಮತ್ತು ನನ್ನ ಕೆಲಸವು ನನಗೆ ಮನ್ನಣೆ ತರಬೇಕೆಂದು ನಾನು ಬಯಸುತ್ತೇನೆ. ಆದರೆ ಸಂಬಂಧವಿಲ್ಲದ ವಿಷಯಗಳಲ್ಲಿ ನನ್ನ ಹೆಸರನ್ನು ಎಳೆದು ತರುವುದು ನೋವಿನ ಸಂಗತಿ. ಈ 'ಮದುವೆ ವಿವಾದ'ದ ಬಗ್ಗೆ ನಾನು ಸ್ಪಷ್ಟನೆ ನೀಡಲು ಬಯಸುತ್ತೇನೆ. ಧನುಷ್ ನನಗೆ ಸಹೋದರನಂತೆ. ನಮ್ಮ ನಡುವೆ ವೃತ್ತಿಪರ ಗೌರವ ಮಾತ್ರ ಇದೆ. ಹುಡುಗಿಯ ವೈಯಕ್ತಿಕ ಜೀವನದ ಬಗ್ಗೆ ಇಂತಹ ವದಂತಿಗಳನ್ನು ಏಕೆ ಸೃಷ್ಟಿಸಲಾಗುತ್ತದೆ ಎಂದು ನನಗೆ ಅರ್ಥವಾಗುತ್ತಿಲ್ಲ. ಲೈಕ್ ಮತ್ತು ಶೇರ್ಗಳಿಗಾಗಿ ಮಾಡುವ ಇಂತಹ ಕೆಲಸಗಳು ನಮ್ಮ ಜೀವನದ ಮೇಲೆ ಬಲವಾದ ಪರಿಣಾಮ ಬೀರುತ್ತವೆ" ಎಂದು ಮೃಣಾಲ್ ಠಾಕೂರ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
What's Your Reaction?
Like
0
Dislike
0
Love
0
Funny
0
Angry
0
Sad
0
Wow
0