17ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; ‘ವನ್ಯಾ’ ಚಿತ್ರಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಗರಿ!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅದ್ಧೂರಿಯಾಗಿ ನಡೆದ 17ನೇ ಆವೃತ್ತಿಯ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (BIFFES-2026) ಕನ್ನಡದ ‘ವನ್ಯಾ’ (Vanya) ಚಲನಚಿತ್ರವು ಪ್ರತಿಷ್ಠಿತ ‘ಅತ್ಯುತ್ತಮ ಕನ್ನಡ ಚಿತ್ರ’ ಪ್ರಶಸ್ತಿಗೆ ಭಾಜನವಾಗಿದೆ.
ಈ ಕುರಿತು ಚಿತ್ರತಂಡವು ಅಧಿಕೃತ ಪ್ರಕಟಣೆಯಲ್ಲಿ ತಮ್ಮ ಸಂತಸವನ್ನು ಹಂಚಿಕೊಂಡಿದೆ. ‘ನಮ್ಮ ವನ್ಯಾ ಚಿತ್ರಕ್ಕೆ ಇಂತಹದೊಂದು ಗೌರವ ಸಿಕ್ಕಿರುವುದು ಅತೀವ ಸಂತೋಷ ಮತ್ತು ಹೆಮ್ಮೆಯನ್ನು ತಂದಿದೆ. ಈ ಕ್ಷಣದಲ್ಲಿ ನಮಗೆ ಮಾತುಗಳೇ ಬರುತ್ತಿಲ್ಲ ಎಂದು ತಂಡ ಭಾವುಕವಾಗಿ ನುಡಿದಿದೆ.
ಇದನ್ನೂ ಓದಿ: T20 world cup: ಅಭಿಷೇಕ್ ಶರ್ಮಾಗೆ ಜೋಡಿ ಯಾರು..? ಇಬ್ಬರು ಸ್ಟಾರ್ಗಳ ಮಧ್ಯೆ ಫೈಟ್..!
ತೀರ್ಪುಗಾರರಿಗೆ ಮತ್ತು ಸರ್ಕಾರಕ್ಕೆ ಧನ್ಯವಾದ
ತಮ್ಮ ಚಿತ್ರವನ್ನು ಗುರುತಿಸಿ ಪ್ರಶಸ್ತಿ ನೀಡಿದ್ದಕ್ಕಾಗಿ BIFFES ಆಯೋಜಕರಿಗೆ, ಪೂರ್ವವೀಕ್ಷಣೆ ಸಮಿತಿ (Preview Committee) ಹಾಗೂ ಅಂತಿಮ ತೀರ್ಪುಗಾರರಿಗೆ (Jury) ಚಿತ್ರತಂಡ ಧನ್ಯವಾದ ಅರ್ಪಿಸಿದೆ. ವೇದಿಕೆಯನ್ನು ಕಲ್ಪಿಸಿಕೊಟ್ಟ ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಕೃತಜ್ಞತೆ ಸಲ್ಲಿಸಿದೆ.
ಇದನ್ನೂ ಓದಿ: ವೈಭವ್ ಸೂರ್ಯವಂಶಿ ಇದುವರೆಗೂ ಮಾಡಿದ ದಾಖಲೆಗಳು ಏನೇನು ಗೊತ್ತಾ? ಇಲ್ಲಿದೆ ಫುಲ್ ಡೀಟೈಲ್ಸ್
ತಂಡದ ಶ್ರಮಕ್ಕೆ ಸಿಕ್ಕ ಫಲ
‘ಇದು ಕೇವಲ ಒಂದು ಪ್ರಶಸ್ತಿಯಲ್ಲ, ಬದಲಾಗಿ ಇಡೀ ವನ್ಯಾ ತಂಡದ ಹಗಲಿರುಳಿನ ಶ್ರಮಕ್ಕೆ ಸಿಕ್ಕ ಪ್ರತಿಫಲ. ತಂಡದ ಪ್ರತಿಯೊಬ್ಬ ಸದಸ್ಯರ ನಿಷ್ಠೆ ಮತ್ತು ಕಠಿಣ ಪರಿಶ್ರಮದಿಂದಲೇ ಈ ಸಾಧನೆ ಸಾಧ್ಯವಾಯಿತು ಎಂದು ಚಿತ್ರತಂಡದ ಪ್ರಮುಖರು ತಿಳಿಸಿದ್ದಾರೆ. ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಹಲವು ಗುಣಮಟ್ಟದ ಸಿನಿಮಾಗಳ ನಡುವೆ ‘ವನ್ಯಾ’ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿರುವುದು ಕನ್ನಡ ಚಿತ್ರರಂಗದ ಮಟ್ಟಿಗೆ ಹೆಮ್ಮೆಯ ವಿಷಯವಾಗಿದೆ.
ಇದನ್ನೂ ಓದಿ: ಲೀಗ್ ಪಂದ್ಯಗಳು ನೀರು ಕುಡಿದಷ್ಟೇ ಸರಾಗ.. ಟೀಂ ಇಂಡಿಯಾಗೆ ಚಾಲೇಂಜ್ ಎಲ್ಲಿ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0