ಕನಕೋತ್ಸವ, ಗಂಗೋತ್ಸವದಲ್ಲಿ ಬಿಗ್ ಬಾಸ್ ವಿನ್ನರ್ ಗಿಲ್ಲಿ ಹವಾ ಜೋರು: ಗಿಲ್ಲಿ ಮುಂದೇನು ಮಾಡ್ತಾರೆ?

ಪಳಾರ್ ಗಿಲ್ಲಿಗೆ ಪ್ಯಾನ್ ಇಂಡಿಯಾ ಲೆವೆಲ್ ಕ್ರೇಜ್!.. ಗಿಲ್ಲಿ ಸ್ವ್ಯಾಗ್.. ಫ್ಯಾನ್ಸ್ ಸ್ವಿಂಗ್.. ನೂಕಾಟ ತಳ್ಳಾಟ!..ಕನಕೋತ್ಸವದಲ್ಲಿ ಗಿಲ್ಲಿ ದಂಡು ಕಂಡು ಗಣ್ಯರೇ ದಂಗು!
ಕೆಲವರು ಇತಿಹಾಸ ಸೃಷ್ಟಿ ಮಾಡಿ ಗೆಲ್ತಾರೆ. ಕೆಲವ್ರು ಅತಿಹಾಸ್ಯ ಸೃಷ್ಟಿ ಮಾಡಿ ಗೆಲ್ತಾರೆ. ಗಿಲ್ಲಿ ಅನ್ನೋ ನೇಮು, ಈ ದಿನ ಈ ಎರಡನ್ನೂ ಸೃಷ್ಟಿ ಮಾಡಿಬಿಟ್ಟಿದೆ. ನಮ್ ಕನ್ನಡದ ಜನ ಅಭಿಮಾನ ಅಂತ ಒಂದ್ಸರಿ ಫಿಕ್ಸ್ ಆಗ್ಬಿಟ್ರೆ.. ಆ ಪ್ರೀತಿಗಾಗಿ ಪೂಜೆಗಳನ್ನೂ ಮಾಡ್ತಾರೆ. ಆರತಿಗಳನ್ನೂ ಹಿಡಿತಾರೆ.ಗಿಲ್ಲಿ ಕೆಲ ಶೋಗಳಲ್ಲಿದ್ದಾಗಲೇ ಫ್ಯಾನ್ಬೇಸ್ ಶುರುವಾಗಿತ್ತು. ಬಿಗ್ಬಾಸ್ಗೆ ಹೋದ್ಮೇಲೆ ಆ ಕ್ರೇಜ್ ಡಬಲ್ ಆಯ್ತು.. ಬಿಗ್ ಬಾಸ್ ಮನೆಯಿಂದ ಆಚೆ ಬಂದ್ಮೇಲಂತೂ ಪ್ಯಾನ್ ಇಂಡಿಯಾ ಲೆವೆಲ್ಗೆ ಹೋಯ್ತು. ಇತ್ತೀಚೆಗೆ ಕನಕೋತ್ಸವ, ಗಂಗೋತ್ಸವದಲ್ಲಿ ಕಂಡ ಗಿಲ್ಲಿದಂಡಿಗೆ, ಇಡೀ ಉತ್ಸವವೇ ಗಿಲ್ಲಿ ಗಿಲ್ಲಿ ಗಿಲ್ಲಕ್ಕೂ ಅನಿಸಿದೆ.
ದಂಡು.. ಇದು ಗಿಲ್ಲಿ ದಾಂಡಿನ ಸೌಂಡು.. ಇದು ಕನಸಾ ನನಸಾ ಅಂತ ಗಿಲ್ಲಿ ನಟ, ನೋಡ್ಕೊಂಡ್ರೂ, ಇನ್ನೂ ಭ್ರಮೆ ಅನ್ಸೋ ಫ್ಯಾನ್ಸ್ ಬ್ಯಾಂಡು. ಫೇಸ್ಬುಕ್ ಲೈವ್ನಲ್ಲಿ ಪಂಚಿಂಗ್ ಪಂಟರ್.. ಡಿಕೆಡಿಯಲ್ಲಿ ಪಕ್ಕಾ ಎಂಟರ್ಟೈನರ್.. ಭರ್ಜರಿ ಬ್ಯಾಚ್ಯುಲರ್ನಲ್ಲಿ ಫನ್ ಕ್ರೀಯೇಟರ್. ಬಿಗ್ಬಾಸ್ ಹೌಸ್ನಲ್ಲಿ ಕಲಾ ಪಂಟರ್ಗಳ ಹಂಟರ್. ಗಿಲ್ಲಿ ಎಲ್ಲಿದ್ರೆ ಅಲ್ಲಿ ಫನ್ ಗಾಳಿ ಬೀಸ್ತಲೇ ಇತ್ತು. ಇತ್ತೀಚೆಗೆ ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ಹವಾ ಬೇರೆ ಲೆವೆಲ್ಗೆ ಹೋಗಿತ್ತು. ಮಂಡ್ಯದ ಹುಡ್ಗ ಈಗ ಇಂಡಿಯಾದ ಹುಡ್ಗ ಆಗಿದ್ದಾನೆ. ಪಂಚ್ ಮ್ಯಾನ್ ಯಾವಾಗ ಹೇಗೆ ಪಂಚ್ ಕೊಡ್ತಾನೆ.. ಅದೇಗೆ ಜನ್ರ ಮನಸ್ಸನ್ನ ಕೊಳ್ಳೆ ಹೊಡಿತಾನೆ ಅಂತ ಊಹಿಸೋದೆ ಕಷ್ಟ. ಪಳಾರ್ ಗಿಲ್ಲಿ, ಗೂಗ್ಲೀ ಗಿಲ್ಲಿಯ ಅಬ್ಬರಕ್ಕೆ ಇದು ಅಭಿಮಾನಿಗಳು ಹಾಕಿರೋ ಹಬ್ಬದ ಚಪ್ಪರ.
ಗಿಲ್ಲಿ ಹಾವಳಿಗೆ ಮಳವಳ್ಳಿಗಷ್ಟೇಯಲ್ಲ. ಇಡೀ ಕಲಾಭಿಮಾನಿಗಳೇ ಫಿದಾ ಆಗಿದಾರೆ. ಬಿಗ್ಬಾಸ್ ಗೆದ್ದು ಆಚೆ ಬಂದ್ಮೇಲೆ ಗಿಲ್ಲಿ ಕ್ರೇಜ್ ಮಾಮೂಲಿಯಲ್ಲಿಲ್ಲ. ಯಾವ ಪ್ಯಾನ್ ಇಂಡಿಯಾ ಸ್ಟಾರ್ಗೂ ಕಮ್ಮಿಯಿಲ್ಲ. ಗಿಲ್ಲಿ ಯಾವ ಸ್ಟೇಜ್ ಹತ್ತಿದ್ರೂ.. ಮೈಕ್ ಹಿಡಿದು ನಿಂತ್ರೂ.. ಗಿಲ್ಲಿ ಗಿಲ್ಲಿ ಜಸ್ಟ್ ಗಿಲ್ಲಿ ಹೆಸ್ರಷ್ಟೇ. ಗಿಲ್ಲಿಯ ಪಂಚ್ಗಳೇ ಬುಲೆಟ್ಸು ಗನ್.. ದಿ ನೇಮ್ ಈಸಿ ಗಿಲ್ಲಿ.. ಫ್ರಮ್ ಮಳ್ಳವಳ್ಳೀ ಇದೇ ಈಗಿನ ಗಿಲ್ಲಿ ಸ್ಲೋಗನ್.
ಪಳಾರ್ ಗಿಲ್ಲಿಗೆ ಪ್ಯಾನ್ ಇಂಡಿಯಾ ಲೆವೆಲ್ ಕ್ರೇಜ್!
ಗಿಲ್ಲಿ ಅಬ್ಬರ... ಫ್ಯಾನ್ಸ್ ಪ್ರವಾಹ.. ನೂಕಾಟ ತಳ್ಳಾಟ!
ಕನಕೋತ್ಸವದಲ್ಲಿ ಗಿಲ್ಲಿ ದಂಡು ಕಂಡು ಗಣ್ಯರೇ ದಂಗು!
ಇತ್ತೀಚೆಗೆ ಗಿಲ್ಲಿಗೆ ಎಲ್ಲಾ ದೊಡ್ಡ ದೊಡ್ಡ ಈವೆಂಟ್ಗಳಿಗೆ, ಶೋಗಳಿಗೆ ಇನ್ವಿಟೇಷನ್ ಬರ್ತಿದೆ. ಹಾಗೆ ಕನಕಪುರದಲ್ಲಿ ನಡೆದಿದ್ದ ಕನಕೋತ್ಸವಕ್ಕೆ ಎಷ್ಟೋ ಸ್ಟಾರ್ ಜೊತೆಗೆ ಗಿಲ್ಲಿಗೂ ಆಹ್ವಾನ ಹೋಗಿತ್ತು. ಬಟ್ ಆ ಈವೆಂಟ್ನಲ್ಲಿ ಹುಚ್ಚೆಬ್ಬಿಸಿದ್ದು.. ದೊಡ್ಡ ಮಟ್ಟದ ಸದ್ದು ಮಾಡಿದ್ದು ಗಿಲ್ಲಿ.
ಅಷ್ಟಕ್ಕೂ ಈ ಈವೆಂಟ್ ಯಾಕೆ ನಡೆದಿದ್ದು. ಅಲ್ಲಿಗೆ ಗಿಲ್ಲಿ ಯಾಕೆ ಬಂದಿದ್ದು ಅನ್ನೋದನ್ನ ಹೇಳ್ಬಿಡ್ತೀವಿ ಕೇಳಿ. ಕನಕೋತ್ಸವ ಅನ್ನೋದು ರಾಮನಗರ ಜಿಲ್ಲೆಯ ಕನಕಪುರದಲ್ಲಿ ಡಿಕೆಶಿ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ, ಡಿಕೆ ಶಿವಕುಮಾರ್ ಅವ್ರ ಸಹೋದರ ಡಿಕೆ ಸುರೇಶ್ ಅವ್ರಿಂದ ಆಯೋಜಿತವಾಗಿದ್ದ, ಐದು ದಿನಗಳ ಕ್ರೀಡೆ ಮತ್ತು ಸಂಸ್ಕೃತಿಯ ಬೃಹತ್ ಉತ್ಸವ ಇದು. ಇದು ಕಲೆ, ಕ್ರೀಡೆ, ಯೋಗಾಸನ, ಮ್ಯಾರಥಾನ್ ಓಟ, ರಸಮಂಜರಿ ಕಾರ್ಯಕ್ರಮಗಳಿದ್ದ ರಂಗಸಜ್ಜಿಕೆ.
ಇದು ಕೇವಲ ಎಂಟರ್ಟೈನ್ಮೆಂಟ್ ಈವೆಂಟ್ ಆಗಿರಲಿಲ್ಲ. ಈ ಮೂಲಕ ಸ್ಥಳೀಯ ಪ್ರತಿಭೆಗಳನ್ನ ಎಂಕರೇಜ್ ಮಾಡೋದು.. ಹಲವಾರು ಪ್ರತಿಭೆಗಳನ್ನ ಗುರುತಿಸಿ, ಸನ್ಮಾನಿಸೋದು ಈ ಉತ್ಸವದ ಉದ್ದೇಶವಾಗಿತ್ತು. ಎಲ್ಲದಕ್ಕಿಂಥ ಮುಖ್ಯವಾಗಿ ಸಾಂಸ್ಕೃತಿಕ ಹಬ್ಬವಾಗಿತ್ತು.
ಜನವರಿ 28 ರಿಂದ ಫೆಬ್ರವರಿ 1ರ ವರೆಗೆ ಐದು ದಿನಗಳ ಕಾಲ ನಡೆದಿದ್ದ ಈ ಆಚರಣೆ.. ಎಷ್ಟೋ ಕಲಾವಿದರ ಸಂಗಮವಾಗಿತ್ತು. ಎಷ್ಟೋ ಉದ್ದೇಶಗಳ ಸಂಯಮವಾಗಿತ್ತು. ಈ ಟೈಮ್ನಲ್ಲಿ ಈ ಉತ್ಸವಕ್ಕೆ ಗಿಲ್ಲಿ ಬರ್ತಿದ್ದಾನೆ ಅಂದ ತಕ್ಷಣ ಅಲ್ಲಿ ದೊಡ್ಡ ದಂಡೇ ಸೇರಿಬಿಟ್ಟಿತ್ತು. ಆಗ ಅಲ್ಲಾಗಿದ್ದೇ ಈ ಕ್ರೇಜು.
ಹೆಣ್ಮಕ್ಕಳು ಹುಟ್ಟಿದ್ರೆ ಟೆನ್ಷನ್ ಬೇಡ.. ಅವ್ರು ಟೆನ್ ಸನ್ಗೆ ಸಮ!
ಗಿಲ್ಲಿ ಪಂಚಸ್ಗೆ ಗಂಟಲು ಕಿತ್ತುಬರುಂತೆ ಕೂಗಾಡಿದ ಫ್ಯಾನ್ಸ್!
ಗಿಲ್ಲಿ ಹವಾ ಎಲ್ಲೋದ್ರೂ ಕಮ್ಮಿಯಂತೂ ಇರಲ್ಲ. ಈ ಬಾರಿಯ ಬಿಗ್ಬಾಸ್ ಶೋ.. ಪ್ಯಾನ್ ಇಂಡಿಯಾ ಶೋ ಆಗಿಬಿಟ್ಟಿತ್ತು. ಗಿಲ್ಲಿ ಟೈಮಿಂಗ್ ಡೈಲಾಗ್ಸ್ಗೆ.. ಪಂಚಿಂಗ್ ಟಾಕ್ ಬುಲ್ಲೆಟ್ಸ್ಗೆ ಜನ ಫಿದಾ ಆಗಿದ್ರು. ಆತ ಬಿಗ್ ಮನೆಯಲ್ಲಿ ಹೇಳಿದ್ದ ಒಂದು ಮಕ್ಕಳು ಹೇಳುವ ಪದ್ಯ ಈಗ್ಲೂ ಫೇಮಸ್.. ಅದಕ್ಕಾಗಿನೇ ಈ ಅಭಿಮಾನದ ಅಬ್ಬರ.
ಗಿಲ್ಲಿಯ ಟ್ಯಾಟೂಗಳು ಆದವು. ಬ್ಯಾನರ್ಸ್ ಆದವು.. ಗಾಡಿಗಳ ಮೇಲೆ ಸ್ಟಿಕ್ಕರ್ಸ್ ಆದ್ವು.. ಱಲಿಗಳಾದ್ವು.. ಮಂದಿರಗಳಲ್ಲಿ ಪೂಜೆ ಪುನಸ್ಕಾರಗಳು ಆದ್ವು. ಈಗ ವೇದಿಕೆಗಳಲ್ಲಿ ಕ್ರೇಜ್ ಶುರುವಾಗಿದೆ. ಗಿಲ್ಲಿಗೆ ಇದು ನಿಜವಾ ಸುಳ್ಳಾ ಅನ್ನೋ ಭ್ರಮೆ ಶುರುವಾಗಿಬಿಟ್ಟಿದೆ.
ಡಿಕೆ ಶಿವಕುಮಾರ್ ಅವ್ರ ಕರೆಗೆ ಬೆಚ್ಚಿಬಿದ್ದಿನಂತೆ ಗಿಲ್ಲಿ!
ಕನಕಪುರ ಜನರಿಗಾಗಿ ಗಿಲ್ಲಿ ಹಾಡಿದ್ದ ಹಾಡು ಹೇಗಿತ್ತು?
ಈ ಕನಕೋತ್ಸವವನ್ನ ಡಿಕೆ ಬ್ರದರ್ಸ್ ಆಯೋಜಿಸಿದ್ದು.. ಈ ಈವೆಂಟ್ಗೆ ಗಿಲ್ಲಿಗೆ ಕಾಲ್ ಮಾಡಿ ಕರೆದಿದ್ದು ಯಾರೋ ಮ್ಯಾನೆಜರ್ಗಳೋ.. ಇನ್ಯಾರೋ ಅಲ್ಲ.. ಸ್ವತಃ ಕರ್ನಾಟಕದ ಡಿಸಿಎಂ ಡಿಕೆ ಶಿವಕುಮಾರ್ ಅವ್ರೇ ಕಾಲ್ ಮಾಡಿದ್ರಂತೆ.. ಡಿಕೆ ಸಾಹೆಬ್ರ ಧ್ವನಿ ಕೇಳೀ ಗಿಲ್ಲಿ ರಿಯಾಕ್ಷನ್ ಏನು ಗೊತ್ತಾ?
ಗಿಲ್ಲಿಯ ಹವಾ ಇಷ್ಟೇ ಅಲ್ಲ.. ಇಡೀ ರಾಜ್ಯದ ತುಂಬಾ ಅಭಿಮಾನಿ ಬಳಗ ಹುಟ್ಟಿಕೊಂಡಿದೆ. ಸೋಷಿಯಲ್ ಮೀಡಿಯಾದಲ್ಲೂ ಗಿಲ್ಲಿ ಫಾಲೋವರ್ಸ್ ಒಂದು ಮಿಲಿಯನ್ ದಾಟಿದೆ. ಗಿಲ್ಲಿಯ ಱಪ್ ಸಾಂಗ್ಸ್.. ಡಿಜೆ ಸಾಂಗ್ಸ್ ಹವಾ ಜೋರಾಗಿವೆ. ಇದೇ ಉತ್ಸವದಲ್ಲಿ ಗಿಲ್ಲಿ ಹಾಡು ಹಾಡಿದಾಗ ಹೇಗಿತ್ತು ನೋಡಿ.
ಇದೇ ಸ್ಟೇಜ್ ಮೇಲೆ ಗಿಲ್ಲಿ ಮಿಮಿಕ್ರಿ ಮಾಡಿದಾಗ.. ಡಿಕೆ ಬ್ರದರ್ಸ್ ಮುಗುಳ್ನಗ್ತಲೇ ಇದ್ರು. ಗಿಲ್ಲಿ ಸ್ಟೇಜ್ ನಲ್ಲಿ ಮಿಮಿಕ್ರಿ ಮಾಡಿ ಜನರನ್ನು ರಂಜಿಸಿದ್ದರು.
ಗಿಲ್ಲಿ ಹಾವಳಿ ಇಲ್ಲಿಗೆ ಮುಗಿದಿಲ್ಲ.. ಕ್ರೇಜ್ ಇನ್ನೂ ಕ್ರೇಜಿಯಾಗಿದೆ. ಸ್ಟೇಜ್ಗೆ ನುಗ್ಗಿದ ಜನ.. ಆತನ ಜೊತೆ ಸೆಲ್ಫೀಗೆ ಮುಗಿಬಿದ್ದಿದ್ರು. ಆ ದೃಶ್ಯ ಮತ್ತಷ್ಟು ಪಳಾರ್ ಆಗಿದೆ.
ಗಿಲ್ಲಿಗೆ ಈ ಪಾಟಿ ಫಾಲೋಯಿಂಗ್ ಇದೆ ಅಂತ ಗೊತ್ತೇ ಇಲ್ಲ. ಗಿಲ್ಲಿ ರೇಂಜ್ ಹೇಗಿದೆ? ಎಷ್ಟಿದೆ ಅಂತ ಈ ಕನಕೋತ್ಸವ ಸಾಕ್ಷಿಯಾಗಿತ್ತು. ಹಾಗೆ ಚೆನ್ನಪಟ್ಟಣದಲ್ಲಿ ನಡೆದಿದ್ದ ಗಂಗೋತ್ಸವದಲ್ಲಿ ಗಿಲ್ಲಿ ಕ್ರೇಜ್ ಜೋರಾಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0