ಹಾಫ್ ಸೆಂಚುರಿ ಭಾರಿಸಿದ ನಟಿ ಅಭಿಷೇಕ್ ಬಚ್ಚನ್‌: ಪತ್ನಿ ಐಶ್ಚರ್ಯಾ ರೈ ಹಾರೈಸಿದ್ದು ಹೇಗೆ?

Feb 12, 2026 - 09:44
 0  0
ಹಾಫ್ ಸೆಂಚುರಿ ಭಾರಿಸಿದ ನಟಿ ಅಭಿಷೇಕ್ ಬಚ್ಚನ್‌:  ಪತ್ನಿ ಐಶ್ಚರ್ಯಾ ರೈ ಹಾರೈಸಿದ್ದು ಹೇಗೆ?

ದೇಶಾದ್ಯಂತ ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳ ಪ್ರೀತಿಯ ಮಹಾಪೂರದ ನಡುವೆ ಬಾಲಿವುಡ್  ನಟ ಅಭಿಷೇಕ್ ಬಚ್ಚನ್ ಇಂದು ತಮ್ಮ 50 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅವರ ಪತ್ನಿ, ನಟಿ ಐಶ್ವರ್ಯಾ ರೈ ಬಚ್ಚನ್ ಅವರು ಶುಭಾಶಯಗಳನ್ನು ಕೋರಿದರು, ಅವರ ಹೃದಯಪೂರ್ವಕ ಇನ್‌ಸ್ಟಾಗ್ರಾಮ್ ಪೋಸ್ಟ್ ತಕ್ಷಣವೇ ಎಲ್ಲರ ಗಮನ ಸೆಳೆಯಿತು.

ಅಭಿಷೇಕ್ ಅವರ ಬಾಲ್ಯದ ಚಿತ್ರವನ್ನು  ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ ನಲ್ಲಿ ಹಂಚಿಕೊಂಡಿದಿದ್ದಾರೆ.  ಅಲ್ಲಿ ಅಭಿಷೇಕ್ ಬಚ್ಚನ್  ಕಣ್ಣುಗಳು ಮಾತ್ರ ಗೋಚರಿಸುತ್ತಿದ್ದವು.

ಫೋಟೋ ಜೊತೆಗೆ, ಐಶ್ವರ್ಯಾ ಬರೆದಿದ್ದಾರೆ, "ಪ್ರೀತಿಯ ಬೇಬಿ-ಪಾಪಾ ಅವರಿಗೆ 50 ನೇ ಹುಟ್ಟುಹಬ್ಬದ ಶುಭಾಶಯಗಳು, ದೇವರು ಬಹಳಷ್ಟು ಪ್ರೀತಿ, ಶಾಂತಿ, ಸಂತೋಷ, ಸಂತೃಪ್ತಿ ಮತ್ತು ಉತ್ತಮ ಆರೋಗ್ಯವನ್ನು ನೀಡಲಿ. ಚಿನ್ನದಂತೆ ಇರಿ... ಪ್ರೀತಿಯಲ್ಲಿ ಮಿನುಗು." ಎಂದು ಇನ್ ಸ್ಟಾಗ್ರಾಮ್ ನಲ್ಲಿ ಪತಿ ಅಭಿಷೇಕ್ ಬಚ್ಚನ್ ಬಗ್ಗೆ ನಟಿ ಐಶ್ಚರ್ಯಾ ರೈ ಬರೆದಿದ್ದಾರೆ. 

ಹಿರಿಯ ನಟ ಅಮಿತಾಭ್ ಬಚ್ಚನ್ ಕೂಡ ಈ ಸಂದರ್ಭದಲ್ಲಿ ತಮ್ಮ ಮಗನಿಗೆ ಭಾವನಾತ್ಮಕ ಸಂದೇಶವನ್ನು ಹಂಚಿಕೊಂಡಿದ್ದಾರೆ. ಬ್ಲಾಗ್ ಪೋಸ್ಟ್‌ನಲ್ಲಿ, ಅಭಿಮಾನಿಗಳ ಪ್ರೀತಿ ಮತ್ತು ಆಶೀರ್ವಾದಕ್ಕಾಗಿ ಅವರು ಧನ್ಯವಾದಗಳನ್ನು ಅರ್ಪಿಸಿದರು.
ಅವರು ಬರೆದಿದ್ದಾರೆ, "ಅಭಿಷೇಕ್ ಅವರ 50 ನೇ ಹುಟ್ಟುಹಬ್ಬದಂದು ಅವರಿಗೆ ಶುಭಾಶಯಗಳನ್ನು ಕಳುಹಿಸುವ ಎಲ್ಲರಿಗೂ, ನನ್ನ ಕೃತಜ್ಞತೆ ಮತ್ತು ಪ್ರೀತಿಯನ್ನು ವ್ಯಕ್ತಪಡಿಸುತ್ತೇನೆ... ನಿಮ್ಮ ಆಶೀರ್ವಾದಗಳು ಅವರಿಗೆ ಮುಂದುವರಿಯಲು ಧೈರ್ಯ ಮತ್ತು ಶಕ್ತಿಯನ್ನು ನೀಡುತ್ತವೆ... ವಾತ್ಸಲ್ಯ ಮತ್ತು ಪ್ರೀತಿ." ಎಂದು ಅಮಿತಾಬ್ ಬಚ್ಚನ್ ಬರೆದಿದ್ದಾರೆ. 


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0